ಕಾನೂರು ಹೆಗ್ಗಡತಿ: 2018

“ಕಾನೂರು ಹೆಗ್ಗಡತಿ” ಕಾದಂಬರಿ ಕುರಿತು ಸಂವಾದ ಕಮ್ಮಟ
ನವೆಂಬರ್ 23, 24 ಮತ್ತು 25 2018, ಕುಪ್ಪಳಿ

250px-Kanuru-Heggaditi-Novelಈ ಕಮ್ಮಟದಲ್ಲಿ 1) ಕಾನೂರು ಹೆಗ್ಗಡತಿ ಕಾದಂಬರಿಯನ್ನು ಹೇಗೆ ಓದುತ್ತೇವೆ 2) ಆ ಮೂಲಕ ಒಂದು ಕಾದಂಬರಿಯನ್ನು ಹೇಗೆ ಓದುವುದು ಈ ಎರಡೂ ವಿಷಯಗಳನ್ನು ಚರ್ಚಿಸಲಿದ್ದೇವೆ. ಇಲ್ಲಿರುವ ಎಲ್ಲರೂ ಒಂದು ಬಾರಿಯಾದರೂ ಈ ಕಾದಂಬರಿಯನ್ನು ಓದಿರುತ್ತೇವೆ; ಕೆಲವರು ಹಲವು ಬಾರಿ ಓದಿರಲೂಬಹುದು.  ನಾವು ಈ ಕೃತಿಯನ್ನು ಓದುವಾಗ ಈವರೆಗೆ ನಾವು ಓದಿರುವ ಬೇರೆ ಬೇರೆ ಕೃತಿಗಳ ಜೊತೆಗೆ, ನಮ್ಮ ಬದುಕಿನ ಅನುಭವವನ್ನು ಬೇರೆ ಇರಿಸಿ ಮಾತಾಡುವುದು ಸುಲಭವಲ್ಲ.

ಓದಿನ ಅನುಭವವನ್ನು ವಿವರಿಸಲು ಹೊರಟಾಗ ನಮ್ಮಲ್ಲಿ ಹೆಚ್ಚು ಜನರು ಸಾರಗ್ರಾಹಿಗಳಾಗಿರುತ್ತೇವೆ.  ಅಂದರೆ ಒಟ್ಟಾರೆ ‘ಇದು ನನ್ನ ಅನಿಸಿಕೆ’ ಎಂಬ ನಿಲುವನ್ನು ಮುಂದಿಡುತ್ತೇವೆ. ಮತ್ತೆ ನಮ್ಮಲ್ಲೇ ಕೆಲವರು ವ್ಯಾಖ್ಯಾಣದ ಪರವಾಗಿರುತ್ತೇವೆ.  ಅಂದರೆ ನಮ್ಮ ದೃಷ್ಠಿಯಲ್ಲಿ ಯಾವುದು ಸರಿ ತಪ್ಪು ಎಂದು ನಿಕ್ಕಿಯಾಗಿರುತ್ತದೋ ಅದಕ್ಕನುಗುಣವಾಗಿ ಕೃತಿಯ ಬೆಲೆ ಕಟ್ಟುತ್ತಿರುತ್ತವೆ.  ಈ ಎಲ್ಲವೂ ಸರಿಯೇ ಸರಿ.  ಆದರೆ ಇದನ್ನು ದಾಟಿ ಒಂದು ಕೃತಿಯ ಓದು ‘ಕಂಡುಕೊಳ್ಳುವ’ ನೆಲೆಯಲ್ಲಿ ಇರಲು ಸಾಧ್ಯ.  ಆ ಸಾಧ್ಯತೆಯ ಹುಡುಕಾಟ ಈ ಕಮ್ಮಟದ ಗುರಿ.

ಒಂದು ಸಾಹಿತ್ಯ ಕೃತಿಯನ್ನು 1) ಅದು ಮೈದಳೆದ ಕಾಲ, ದೇಶಗಳ ಹಿನ್ನೆಲೆಯಲ್ಲಿ 2) ಅದನ್ನು ರಚಿಸಿದ ಕೃತಿಕಾರರ ಬದುಕು, ಜೀವನದೃಷ್ಠಿ ಮತ್ತು ಅವರ ಇತರ ಕೃತಿಗಳ ಹಿನ್ನಲೆಯಲ್ಲಿ 3)ಕೃತಿಯು ಓದುಗರ ಮೇಲೆ ಬೀರುವ ಪರಿಣಾಮಗಳ ಹಿನ್ನಲೆಯಲ್ಲಿ ಮತ್ತು 4) ಕೃತಿಯೊಂದು ತನ್ನಲ್ಲೇತಾನು ಪರಿಪೂರ್ಣಗೊಂಡ ರಚನೆ ಎಂಬ ನಿಲುವಿನಲ್ಲಿ ಚರ್ಚಿಸುವ ವಾಡಿಕೆ ಇದೆ.  ಈ ಕಮ್ಮಟದಲ್ಲಿ ನಾಲ್ಕನೆಯ ನೆಲೆಯ ಮೇಲೆ ಒಟ್ಟು ಕೊಡಬೇಕೆಂಬ ಉದ್ದೇಶವಿದೆ.

ಮೊದಲನೆ ದಿನ

Introduction

  1. ಬಿಡಿ ಮತ್ತು ಇಡಿಗಳ ನಂಟು- ಅಂಗಾಂಗಿ ನಂಟಿನ ಬಗೆ-ಅಂಶಾಂಶಿ ನಂಟಿನ ಬಗೆ. ಅಂಗಾಂಗಿ ರಚನೆಯಲ್ಲಿ ಒಂದೊಂದು ಭಾಗವೂ ತನ್ನ ಸ್ವಂತಿಕೆಯನ್ನು ಉಳಿಸಿಕೊಂಡಿದ್ದು ಒಟ್ಟು ರಚನೆಗೆ ಪೂರಕವಾಗಿ ಕೆಲಸ ಮಾಡುತ್ತಿರುತ್ತದೆ. ನಮ್ಮ ದೇಹ ಒಂದು ಉದಾಹರಣೆ. ಅಶಾಂಶಿ ರಚನೆಯಲ್ಲಿ ಪ್ರತೊ ಭಾಗವೂ ಇಡೀ ರಚನೆಯ ಚಹರೆಗಳನ್ನು ಹೊಂದಿದ್ದು ತನ್ನ ಸ್ವಂತಿಕೆಯನ್ನು ಇಡಿಯಾಗಿ ಬಿಟ್ಟುಕೊಟ್ಟಿರುತ್ತದೆ. ಅನ್ನದ ಅಗುಳು ಇದಕ್ಕೆ ಉದಾಹರಣೆ.
  2. ತೆರೆದ ರಚನೆ ಮತ್ತು ಮುಚ್ಚಿದ ರಚನೆ: ತೆರೆದ ರಚನೆಗಳಲ್ಲಿ ನಡುವೆ ಬೇರೆ ಬೇರೆ ಅಂಶಗಳನ್ನು ಸೇರಿಸಲು ಅವಕಾಶವಿರುತ್ತದೆ. ಕಥೆಗಳಲ್ಲಿ ಉಪ ಕಥೆಗಳನ್ನು ಸೇರಿಸಿದಂತೆ.  ಮುಚ್ಚಿದ ರಚನೆಗಳಲ್ಲಲಿ ಏನನ್ನೂ ಸೇರಿಸಲಾಗದು.  ಚುಕ್ಕಿ ರಂಗೋಲೆ ಒಂದು ಸುಲಭವಾದ ಉದಾಹರಣೆ.
  3. ಆರಂಭ ಮತ್ತು ಕೊನೆ: ಮುಂದುವರೆಯುವಗೆರೆಯ ರಚನೆ ಮತ್ತು ಒಳ ಸುಳಿಗಳ ರಚನೆ
  4. ಕಾದಂಬರಿ ಇತರ ರಚನೆಗಳಿಂದ ಹೇಗೆ ಬೇರೆ?

    Discussion of Q1 to Q4

    Pre Discussion to Q5 to Q9
  5. ಕಥೆ ಮತ್ತು ಕಥನ
  6. ಪಾತ್ರಗಳ ಲೋಕ: ಪರಿಸರ- ಮಾನವರು, ಪ್ರಾಣಿಗಳು, ಸಸ್ಯಗಳು ಮತ್ತು ವಸ್ತುಗಳು; ಭೂತ, ದೆವ್ವಗಳು
  7. ಬಣ್ಣನೆಗಳು: ಸ್ವರೂಪ ಮತ್ತು ಉದ್ದೇಶ
  8. ಚರ್ಯೆಗಳು (ದೇಹ ಮತ್ತು ಮಾತು): ಸನ್ನಿವೇಶ ಮತ್ತು ಸ್ವಭಾವ
  9. ನಿರೂಪಕರು ಮತ್ತು ಕಾದಂಬರಿಯ ಚಲನೆಯ ನಂಟು, ನಿರೂಪರು ಕಥನವನ್ನು ನಿಯಂತ್ರಿಸುತ್ತಾರೋ ಇಲ್ಲವೇ ಕಥನ ಮತ್ತು ನಿರೂಪಣೆಗಳ ನಡುವೆ ಬಿಕ್ಕಟ್ಟು ಇದೆಯೋ? ನಿರೂಪಣೆಯ ಕಣ್ಣಿನ ಚಹರೆ ಏನು? ಅಂದರೆ ಅದು ದೂರ ನಿಂತು ನೋಡುವಂತಿದೆಯೋ ಇಲ್ಲವೇ ಕಥೆಯ ಲೋಕದಲ್ಲಿ ತಾನೂ ಇರುವಂತೆ ತಿಳಿದಿದೆಯೋ?
    Discussion of Q5 to Q9

    ಎರಡನೆ ದಿನ
    ಸಿನಿಮಾ ಚರ್ಚೆ: Anna Kareninna (2012)

    AnnaKarenina2012Poster

    Pre Discussion to Q10 to Q15

  10. ಕಾಲದ ಓಟದ ನಿರ್ವಹಣೆ: ಕಳೆದು ಹೋದದ್ದು, ಇಂದು ಮತ್ತು ಬರಲಿರುವುದು
  11. ಕಾದಂಬರಿ ಲೋಕಕ್ಕೆ ಬರುವ ಹೊರಗಿನ ಅಂಶಗಳು: ಭಗವದ್ಗೀತೆ, ಮ್ಯಾಥ್ಯೂ ಅರ್ನಾ‍ಲ್ಡ್, ವರ್ಡ್ವರ್ತ್, ಬುದ್ಧ; ಪುಸ್ತಕ, ಬೈಸಿಕಲ್, ಪೆನ್, ನೋಟು, ಹೊರಗಿನ ವ್ಯಕ್ತಿಗಳು: ಮಾರ್ಕ
  12. ಕಾಲದ ಚಲನೆ: ಮುಂಜಾನೆ, ಹಗಲು, ಸಂಜೆ, ರಾತ್ರಿ, ಕಥೆಯ ಕಾಲಾವಧಿ ಮತ್ತು ನಿರೂಪಣೆಯ ಕಾಲ
  13. ಪ್ರಕೃತಿ ವ್ಯಾಪಾರಗಳು: ಗಾಳಿ, ಮಳೆ, ಬಿಸಿಲು
  14. ಕನಸುಗಳು, ಮುಂಗಾಣ್ಕೆಗಳು

    Discussion of Q10 to Q14

  15. ಕಾದಂಬರಿಯ ನೈತಿಕಕೇಂದ್ರ: ಅಧಿಕೃತತೆ ಮತ್ತು ಪ್ರಾಮಾಣಿಕತೆ (ಲಯನೆಲ್ ಟ್ರಿಲಿಂಗ್ ಮಾದರಿ)
    Discussion of Q15

    Pre Discussion to Q16 to Q19

  16. ಸಾವುಗಳು (ಮನುಷ್ಯರು, ಪ್ರಾಣಿಗಳು, ಮರಗಿಡಗಳು) ಮದುವೆ, ಜನನ (ಕೌಲಿ ಕರು ಹಾಕಿದ್ದು)
  17. ಬೇಟೆಗಳು
  18. ಎರಡು ತಲೆಮಾರುಗಳು: ಮಧ್ಯವಯಸ್ಕರು, ಯುವವಯಸ್ಕರು, ಎಳೆಯರು, ವೃದ್ಧರು
  19. ಸಾಮಾಜಿಕ ಸಂಬಂಧಗಳು: ದುಡಿಮೆ ಉತ್ಪಾದನೆ; ಬೆಳೆ, ಕಳ್ಳು, ಬೇಟೆಯ ಮಾಂಸ

    Discussion of Q16 to Q19

    ಮೂರನೆ ದಿನ
    ಸಿನಿಮಾ ಚರ್ಚೆ:ಕಾನೂರು ಹೆಗ್ಗಡತಿ 1999download

    Pre Discussion to Q20 to Q23

  20. ನಂಬಿಕೆಯ ಲೋಕ: ಆಚರಣೆಗಳು, ಬಲಿ, ಪೂಜೆ
  21. ಪಾತ್ರಗಳ ಚಲನೆ: ಏರುವಿಕೆ ಮತ್ತು ಇಳಿಯುವಿಕೆ
  22. ಮನೆಯೊಳಗೆ (ಮುತ್ತಳ್ಳಿ, ಕಾನೂರು, ಸೇತಳ್ಳಿ, ಕೆಳಕಾನೂರು, ನೆಲ್ಲುಹಳ್ಳಿ, ದುಡಿಯುವವರ ಬಿಡಾರಗಳು) ಮತ್ತು ಮನೆಯ ಹೊರಗೆ (ಕತ್ತಲಗಿರಿ, ಕಳ್ಳಂಗಡಿ, ಕಾನೂಬೈಲು, ಅಗ್ರಹಾರ)
  23. ಕಾದಂಬರಿಯ ಕ್ರಯಾ ವರ್ತುಲ: ಒಳಗಿರುವ ಪಾತ್ರಗಳು; ಅಂಚಿನ ಪಾತ್ರಗಳು; ಹೊರಗುಳಿಯುವ ಪಾತ್ರಗಳು
  24. ಕಾದಂಬರಿಯ ಕೊನೆಯ ಅಧ್ಯಾಯ
    Discussion of Q20 to Q24

Ending Note:

***