ಡಾ.ಬೆಸಗರಹಳ್ಳಿ ರಾಮಣ್ಣ ಕಥಾಸಂಕಲನ ಪ್ರಶಸ್ತಿ

          ಕನ್ನಡ ಕಥಾಲೋಕಕ್ಕೆ ಅಮೋಘ ಕೊಡುಗೆ ನೀಡಿದ ಡಾ. ಬೆಸಗರಹಳ್ಳಿ ರಾಮಣ್ಣ ಅವರ ನಿಧನಾನಂತರ ಅವರ ಹೆಸರಿನಲ್ಲಿ ಪ್ರತಿ ವರ್ಷ  ಆಯಾ ವರ್ಷದಲ್ಲಿ ಪ್ರಕಟವಾದ ಅತ್ಯುತ್ತಮ ಕಥಾ ಸಂಕಲನವೊಂದಕ್ಕೆ ಪ್ರಶಸ್ತಿ ನೀಡಿ ಗೌರವಿಸುವ ಯೋಜನೆಯನ್ನು ಮಂಡ್ಯದ ಯುವಬರಹಗಾರರ ಸಂಘ 2003ರಲ್ಲಿ ಆರಂಭಿಸಿತು. ಅನಂತರ ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ ಆರಂಭವಾದ ನಂತರ 2008ರಿಂದ  ಈ ಪರಂಪರೆಯನ್ನು ಮುಂದುವರೆಸಿದೆ. ಆರಂಭದಲ್ಲಿ ರೂ. 5000/- ನಗದು ಬಹುಮಾನವನ್ನು ಕಾಲಕಾಲಕ್ಕೆ ಹೆಚ್ಚಿಸಿ ಪ್ರಶಸ್ತಿ ವಿಜೇತ ಕೃತಿಗೆ ಈಗ ರೂ. 25,000/- ನೀಡಲಾಗುತ್ತಿದೆ. 2008ರಿಂದ ೀ ಪ್ರಶಸ್ತಿಯನ್ನು ಮಂಡ್ಯದ ಶ್ರೀ ನಾಲ್ವಡಿ ಕೃಷ್ಣರಾಜ ೊಡೆಯರ್ ಕಲಾಮಂದಿರದಲ್ಲೇ ಪ್ರದಾನ ಮಾಡಲಾಗುತ್ತಿದೆ. ಪ್ರಶಸ್ತಿ ಸಮಾರಂಭದ ದಿನ ಪುಸ್ತಕ ಮಾರಾಟ ಮಳಿಗೆ, ಪ್ರತಿ ವರ್ಷ ಸಮುದಾಯಪರವಾದ ವಿಷಯವೊಂದರ ಬಗ್ಗೆ ಚಿತ್ರ ರೂಪಕ ಪ್ರದರ್ಶನ ಏರ್ಪಡಿಸಲಾಗುತ್ತದೆ. ಸಮಾರಂಭಕ್ಕೆ ಮುನ್ನ ಪ್ರಸಿದ್ಧ ಗಾಯಕರಿಂದ ಭಾವಗಾಯನ ಕಾರ್ಯಕ್ರಮ ವ್ಯವಸ್ಥೆಗೊಳಿಸಲಾಗುತ್ತದೆ. ನಾಡಿನ ನಾನಾ ಮೂಲೆಯಿಂದ ಡಾ.ಬೆಸಗರಹಳ್ಳಿ ರಾಮಣ್ಣ ಅವರ ಸ್ನೇಹಿತರು, ಬಂಧುಗಳು ಮತ್ತು  ಸಾಹಿತ್ಯಾಭಿಮಾನಿಗಳು ಸಂಗಮಿಸಿ ಸಾಹಿತ್ಯ ಮತ್ತು ಸಂಸ್ಕೃತಿಯ ಈ ಹಬ್ಬದಲ್ಲಿ ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ.

%d bloggers like this: