ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನವು 2008ರಿಂದ ಪ್ರತಿ ವರ್ಷವು ನಾಡಿನ ಯುವಮನಸ್ಸುಗಳನ್ನು ಕೂಡಿಸಿಕೊಂಡು ಕಥಾಕಮ್ಮಟವನ್ನು ಆಯೋಜಿಸುತ್ತಿದೆ. ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಹಯೋಗದಲ್ಲಿ ಈ ಕಮ್ಮಟವನ್ನು ಪ್ರತಿ ವರ್ಷ ಸಾಮಾನ್ಯವಾಗಿ ನವೆಂಬರ್ ತಿಂಗಳಲ್ಲಿ ಆಯೋಜಿಸಿಕೊಂಡು ಬರಲಾಗುತ್ತಿದೆ. ಆರಂಭದಿಂದಲೂ ಈ ಕಮ್ಮಟಗಳ ರೂಪುರೇಷೆಯನ್ನು ನಾಡಿನ ಖ್ಯಾತ ಭಾಷಾ ವಿಜ್ಞಾನಿ ಮತ್ತು ವಿಮರ್ಶಕ ಡಾ. ಕೆ.ವಿ.ನಾರಾಯಣ ಅವರು ರೂಪಿಸಿ ನಿರ್ದೇಶಿಸುತ್ತಿದ್ದಾರೆ. ರಾಜ್ಯಾದ್ಯಂತ ಎಲ್ಲ ಕ್ಷೇತ್ರಗಳ ಯುವ ಜನರು ಈ ಕಮ್ಮಟದಲ್ಲಿ ಭಾಗವಹಿಸುವ ಆಸಕ್ತಿ ತೋರುತ್ತಿದ್ದು ಆಯ್ದ ಸುಮಾರು 75 ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ನಾಡಿನಾದ್ಯಂತ ಜನಪ್ರಿಯವಾಗಿರುವ ಈ ಕಮ್ಮಟವು ಸಂಪೂರ್ಣವಾಗಿ ಉಚಿತ. ಯಾವುದೇ ಪ್ರವೇಶಶುಲ್ಕವಿಲ್ಲ.
2016
2015
2014
2013
2012
2011
2010
2009
2008