ಕುವೆಂಪು ಓದು

     ರಾಷ್ಟ್ರಕವಿ ಕುವೆಂಪು ಅವರು ಭಾಷೆ, ಸಂಸ್ಕೃತಿ, ವೈಚಾರಿಕತೆ ಬಗ್ಗೆ ತಳೆದ ಜೀವಪರ ನಿಲುವುಗಳು ಮತ್ತು ತೋರಿದ ಮಾರ್ಗಗಳನ್ನು ನಾಡಿನ ಯುವ ಮನಸ್ಸುಗಳಿಗೆ ಮುಟ್ಟಿಸುವ ಕಾರ್ಯವು ಪ್ರತಿಷ್ಠಾನದ ಆಶಯಗಳಲ್ಲೊಂದಾಗಿದೆ. ಅದಕ್ಕಾಗಿ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿ ಸಮೂಹವನ್ನು ಗುರಿಯಾಗಿಸಿಕೊಂಡು “ಕುವೆಂಪು ಓದು” ಎನ್ನುವ ಕಾರ್ಯಕ್ರಮದ ಮೂಲಕ ಅವರನ್ನು ತಲುಪುವ ಕಾರ್ಯ ಮಾಡುತ್ತಿದೆ. ನಾಡಿನಾದ್ಯಂತ ಇರುವ ಕಾಲೇಜುಗಳ ಆಡಳಿತವನ್ನು ಸಂಪರ್ಕಿಸಿ ಕುವೆಂಪು ಅವರ ವಿಚಾರಧಾರೆಗಳನ್ನು ವಿದ್ಯಾರ್ಥಿ ಸಮೂಹದೊಡನೆ ಹಂಚಿಕೊಳ್ಳಲು ಕಾರ್ಯಕ್ರಮ ರೂಪಿಸಲಾಗುತ್ತಿದೆ. ಸಂಪನ್ಮೂಲ ವ್ಯಕ್ತಿಗಳನ್ನು ವಿಷಯ ತಜ್ಞರನ್ನು ಪ್ರತಿಷ್ಠಾನ ತನ್ನ ಖರ್ಚಿನಲ್ಲಿ ಕಳುಹಿಸಿಕೊಟ್ಟು ಕಾರ್ಯಕ್ರಮವನ್ನು ಸಂಘಟಿಸುತ್ತದೆ. ಶಿವಮೊಗ್ಗದ ಸಹ್ಯದ್ರಿ ಕಾಲೇಜಿನಿಂದ ಆರಂಭವಾದ ಈ ಅಭಿಯಾನ ಇದುವರೆವಿಗೂ ಶಿವಮೊಗ್ಗ ಜಿಲ್ಲೆ(6 ಕಾಲೇಜುಗಳು), ಚಿತ್ರದುರ್ಗ( 4), ತುಮಕೂರು(5), ಕೋಲಾರ(5) ಮತ್ತು ಮಂಡ್ಯ(1) ಜಿಲ್ಲೆಗಳಲ್ಲಿ ಕಾರ್ಯಕ್ರಮಗಳನ್ನು ಸಂಘಟಿಸಿದೆ.

%d bloggers like this: