ಅರಿವು ಸಂಭ್ರಮ

ಅರಿವು ಸಂಭ್ರಮ (ಮಕ್ಕಳ ಬೇಸಿಗೆ ಶಿಬಿರ)

ಗ್ರಾಮೀಣ ಭಾಗದಲ್ಲಿ ಕನ್ನಡ ಮಾಧ್ಯಮದಲ್ಲಿ ಐದನೇ ತರಗತಿಯಿಂದ ಎಂಟನೇ ತರಗತಿವರೆಗೆ ಓದುತ್ತಿರುವ ಸರ್ಕಾರಿ ಶಾಲೆಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಭಾಷೆ ಮತ್ತು ವಿವಿಧ ಕೌಶಲ್ಯಗಳಲ್ಲಿ ಅರಿವು ಮೂಡಿಸುವ “ಅರಿವು- ಸಂಭ್ರಮ” ಎಂಬ ಹೆಸರಿನ 7 ದಿನಗಳ ಬೇಸಿಗೆ ಶಿಬಿರವನ್ನು 2013ರಿಂದ ನಡೆಸಲಾಗುತ್ತಿದೆ.

ಮನೋರಂಜನೆಯ ಜೊತೆಗೆ ಮನೋ ವಿಕಾಸವಕ್ಕೆ ದಾರಿಮಾಡಿಕೊಡುವ ಹಾಗು ತಿಳಿವಳಿಕೆಯನ್ನು ಹಂಚಿಕೊಳ್ಳುವ ಮೂಲಕ ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವ ಸಂಪೂರ್ಣ ವಸತಿ ಶಿಬಿರ. ಮಕ್ಕಳಿಗೆ ಅಗತ್ಯವಾದ ಕಲಿಕೆಯ ಸಾಮಗ್ರಿ ವಿತರಣೆಯಿಂದ ಹಿಡಿದು ಊಟ ವಸತಿ ಇತ್ಯಾದಿ ಸಂಪೂರ್ಣ ಉಚಿತ.

ಶಿಬಿರ 1.

ವಿದ್ಯಾಪೀಠ. ಶಿವಾರಗುಡ್ಡ. ಮದ್ದೂರು ತಾ. (14.4.2013ರಿಂದ 20.4.2013ರವರೆಗೆ)

ಭಾಗವಹಿಸಿದ ವಿದ್ಯಾರ್ಥಿಗಳ ಸಂಖ್ಯೆ 103

ಶಿಬಿರ 2.

ಕೆ. ಹೊನ್ನಲಗೆರೆ. ಮೇ 2014. ಭಾಗವಹಿಸಿದ ವಿದ್ಯಾರ್ಥಿಗಳ ಸಂಖ್ಯೆ 95

ಮಕ್ಕಳು ಮಾಡಿದ ವಾರ್ತಾಪತ್ರವನ್ನು ಇಲ್ಲಿ ಡೌನ್ಲೋಡ್ ಮಾಡಿ.

%d bloggers like this: